ಹೌದು ವಿಜಯೇಂದ್ರಗೆ ಉಪಚುನಾವಣೆಯ ನಂತರ ಬಂದ ಫಲಿತಾಂಶವನ್ನು ನೋಡಿ ಹೈಕಮಾಂಡ್ ಈಗ ಶಾಕ್ ಕೊಡಲು ನಿರ್ಧರಿಸಿದೆ
ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೇವಲ ಯಡಿಯೂರಪ್ಪನವರ ಮಗ ಎನ್ನುವ ಕಾರಣಕ್ಕೆ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲಾಗಿದೆ ಎಂಬ ಆರೋಪ ಪಕ್ಷದ ನಾಯಕರಲ್ಲೇ ಕೇಳಿ ಬರುತ್ತಿತ್ತು ವಿಶೇಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಕೆಣಕುತಲೆಬಂದಿದ್ದರು ಈಗ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿರುವುದನ್ನು ಕಂಡು ಹೈಕಮಾಂಡ್ಗೆ ತಲೆನೋವು ಜಾಸ್ತಿಯಾಗಿದೆ
ಒಂದನ್ನು ಅರ್ಥ ಮಾಡಿಕೊಳ್ಳಬೇಕು. ರಾಜ್ಯಾಧ್ಯಕ್ಷನ ಜವಾಬ್ದಾರಿ ಪಕ್ಷ ಸಂಘಟನೆ ಮಾತ್ರವಲ್ಲ ಪಕ್ಷದ ಗೆಲುವು ಕೂಡ ಅಧ್ಯಕ್ಷನ ಜವಾಬ್ದಾರಿಯೇ ಆಗಿರುತ್ತದೆ ಆದರೆ ಈಗ ಸೋಲುಂಡಿರುವ ಬಿಜೆಪಿಗೆ ಇಂತಹ ಅಧ್ಯಕ್ಷ ಬೇಕಾ ಎನ್ನುವ ಪ್ರಶ್ನೆ ಪಕ್ಷದಲ್ಲಿ ಚರ್ಚೆ ಆರಂಭವಾಗಿದೆ
ಕೇವಲ ಲಿಂಗಾಯಿತ ವೀರಶೈವ ಎನ್ನುವ ಕ್ರೆಡಿಟ್ ಇಟ್ಟುಕೊಂಡಿರುವ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗೆಲುವು ತೆಗೆದುಕೊಳ್ಳುವಲ್ಲಿ ವಿಫಲರಾದರು ಈಗ ಹೈಕಮಾಂಡ್ ಹತ್ತಿರ ಇರುವ ಮಾರ್ಗ ಅಧ್ಯಕ್ಷರ ಬದಲಾವಣೆ
ಹಾಗಾದರೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬಹುದು, ಅಧ್ಯಕ್ಷರ ರೇಸ್ ನಲ್ಲಿ ಇರುವವರು ಬಸನಗೌಡ ಪಾಟೀಲ್ ಯತ್ನಾಳ್ ಪ್ರತಾಪ ಸಿಂಹ ತೇಜಸ್ವಿ ಸೂರ್ಯ ಡಾಕ್ಟರ್ ಅಶ್ವಥ್ ನಾರಾಯಣ್ ಮತ್ತಿತರರು ಇದ್ದಾರೆ
ಅಧ್ಯಕ್ಷ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಪ್ರತಾಪ್ ಸಿಂಹರವರನ್ನು ನೇಮಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜೋರು ಚರ್ಚೆ ನಡೆಯುತ್ತಿದೆ ಇದನ್ನೆಲ್ಲಾ ಹೈಕಮಾಂಡ್ ಗಮನಿಸುತ್ತಾ?
ಇದಕ್ಕೆ ಪ್ರತಾಪ್ ಸಿಂಹ ಯತ್ನಾಳ್ ಒಪ್ಪಿಗೆ ಇದೆಯಾ ಈ ಎಲ್ಲಾ ವಿಚಾರಗಳಿಗೂ ಕಾದು ನೋಡಬೇಕಿದೆ
ಆದರೆ ಒಂದಂತೂ ಸ್ಪಷ್ಟ ವಿಜಯೇಂದ್ರ ವಿರುದ್ಧ ಒಂದು ದೊಡ್ಡ ಬಣವೆ ಬಿಜೆಪಿಯಲ್ಲಿ ತಯಾರಾಗಿದೆ ಎಂಬುದು ಸತ್ಯಕ್ಕೆ ಬಹಳ ಹತ್ತಿರವಾದಂತಹ ಮಾತು
ಯಾರೇನೇ ಹೇಳಲಿ ಈ ಸೋಲು ಬಿಜೆಪಿ ಪಾಳಯದಲ್ಲಿ ಬಹಳಷ್ಟು ಸಂಚಲನ ಮೂಡಿಸಿದೆ
ಹೈಕಮಾಂಡ್ಗೆ ಯಾರನ್ನು ಅಧ್ಯಕ್ಷ ಮಾಡಬೇಕೆಂಬುದು ಇನ್ನ ಕ್ಲಾರಿಟಿ ಸಿಕ್ಕಿದ ಹಾಗೆ ಕಾಣಿಸುತ್ತಿಲ್ಲ
ಆದರೆ ಅಧ್ಯಕ್ಷರ ಬದಲಾವಣೆ ಪಕ್ಕ ಎಂದು ಹೇಳಲಾಗುತ್ತಿದೆ.....
Comments